ಝಳಕಿ : ಮಕರ ಸಂಕ್ರಾಂತಿ ನಿಮಿತ್ಯ ದೇವರ ಪಲ್ಲಕ್ಕಿಯೊಂದಿಗೆ ಕಲ್ಯಾಳ್ಳದಲ್ಲಿ ದೇವರ ಸ್ನಾನ ಮತ್ತು (ಜ್ಯೋಳದತೆನೆ)ಸೀತನೇ ತಿನ್ನುವ ಕಾರ್ಯಕ್ರಮ.
ಝಳಕಿ : ಹಿರಿಯರ ವಾಡಿಕೆಯಂತೆ ಪ್ರತಿ ವರ್ಷ ಸಂಕ್ರಮಣ ದಿನದಂದು ಬಳ್ಳೊಳ್ಳಿ ಗ್ರಾಮದೇವರು ವೀರಭದ್ರ ಪಲ್ಲಕ್ಕಿ, ಭೀರದೇವರ ಪಲ್ಲಕ್ಕಿ, ಜೇಟ್ಟಿಂಗೇಶ್ವರ ಪಲ್ಲಕ್ಕಿ ಗ್ರಾಮದ ಮುಖ್ಯ ರಸ್ತೆಯಿಂದ ಡೊಳ್ಳು, ವೃಂದ ವಾದ್ಯಗಳೊಂದಿಗೆ, ಭವ್ಯ ಮೆರವಣಿಗೆ ಮಾಡುತ್ತ ಬಳ್ಳೊಳ್ಳಿ ಗ್ರಾಮದ ಕಲ್ಯಾಳ ಹಳ್ಳಕ್ಕೆ ಬಂದು ದೇವರ ಸ್ನಾನ, ಸೀತನೇ (ಜ್ಯೋಳದ ) ತೆನೆ ಸುಟ್ಟು ಅದನ್ನ ಪ್ರಸಾದ ರೂಪದಲ್ಲಿ ಎಲ್ಲ ದೇವರಿಗೆ ನೈವೇದ್ಯ ಮಾಡಿ ಹಂಚುವದು ನಮ್ಮ ಸಂಪ್ರದಾಯ ಎಂದು ಗ್ರಾಮ ದೇವರ ಪೂಜಾರಿ ಮೋನಪ್ಪ ಪೂಜಾರಿ ವಿವರಿಸಿದರು.
ಬಳ್ಳೊಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಬಳ್ಳೊಳ್ಳಿ ಗ್ರಾಮದ ಎಲ್ಲ ದೇವರುಗಳ ಪಲ್ಲಕಿ ಮೆರವಣಿಗೆ ಮಾಡುತ್ತ ನದಿಯ ಸ್ನಾನ ಮಾಡಿ ಸೀತನೇ ಕಾರ್ಯಕ್ರಮ ನಡೆಸಲಾಯಿತು.
ಗ್ರಾಮದಲ್ಲಿ ಸುಖ,ಶಾಂತಿ, ನೆಲೆಸಲಿ ಎಲ್ಲರಲ್ಲಿ ಸಂಪ್ರದಾಯಕತೆ ಬೆಳೆಯಲಿ, ಗ್ರಾಮದಲ್ಲಿ ಯಾವುದೇ ತರನಾದ ವಾತಾವರಣ ನೆಲೆಸಲಿ ಅನ್ನೋದೇ ಈ ಸಂಭ್ರಮಾಚಾರಣೆ ಮುಖ್ಯ ಉದ್ದೇಶ ಎಂದು ಹನುಮಾನ್ ದೇವಸ್ಥಾನ ಅರ್ಚಕರು ರಮೇಶ ಹೂಗಾರ ತಿಳಿಸಿದರು.
ಈ ಸಂದರ್ಭದಲ್ಲಿ ಭೀರದೇವರ ಪೂಜಾರಿ ಮಲಕಾರಿ ಶಿರಾಷ್ಯಾಡ, ಅಮಸಿದ್ದ ಶಿರಾಷ್ಯಾಡ, ಹಣಮಂತ ಶಿರಾಷ್ಯಾಡ, ಜೇಟ್ಟಿಂಗೇಶ್ವರ ಪೂಜಾರಿ, ನಿಂಗರಾಜ ತೇಲಿ, ರವಿ ಮೇತ್ರಿ, ಸಿದ್ದು ಮೇತ್ರಿ, ಸಿದ್ದು ಹಬಗೊಂಡೆ, ಶರಣಪ್ಪ ತೇಲಿ, ಅಣ್ಣಪ್ಪ ಯರನಾಳ, ಶ್ರೀಶೈಲ್ ಮೇತ್ರಿ, ಈರಣ್ಣ ತೋಟದಾರ, ಗಣೇಶ್ ಮೇತ್ರಿ, ಸಂತೋಷ್ ಮೇತ್ರಿ, ಹಾಗೂ ಬಳ್ಳೊಳ್ಳಿ ಗ್ರಾಮದ ಎಲ್ಲ ಭಕ್ತಾದಿಗಳು ಉಪಸ್ಥಿತರಿದ್ದರು.