ಇಂಡಿ: ಜಿಲ್ಲೆಯಲ್ಲಿ ಅತಿ ಹೆಚ್ಚು ಇಂಡಿ ತಾಲೂಕಿನ ೫೨,೩೩೭/-ರೈತರಿಗೆ ೧೨೭ ಕೊಟಿ ರೂಪಾಯಿ ಪರಿಹಾರ ಪರಿಹಾರ ಹಣ ಜಮೆಯಾಗಿದೆ. ಇದರಿಂದ ನಮ್ಮ ಭಾಗದ ರೈತರಿಗೆ ಸ್ವಲ್ಪ ಪ್ರಮಾಣದ ಅನುಕೂಲವಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ನಗರದ ತಾಲೂಕಾ ಪಂಚಾಯತಿ ಸಭಾಭವನದಲ್ಲಿ ೨೦೨೫-೨೬ನೇ ಸಾಲೀನ ತ್ರೆöÊಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಂಬರುವ ದಿನಗಳಲ್ಲಿ ಯಾವುದೆ ಕಾರಣಕ್ಕು ಕುಡಿಯುವ ನೀರಿನ ತೊಂದರೆಯಾಗದAತೆ ಮುಂಜಾಗೃತ ಕ್ರಮ ಕೈಗೊಳ್ಳಬೇಕು. ಕಳೇದ ಎರಡು ವರ್ಷಗಳಿಂದ ಜೆಜೆಎಂಗೆ ಕೇಂದ್ರ ಸರ್ಕಾರ ಹಣ ಬೀಡುಗಡೆ ಮಾಡಿಲ್ಲ. ಕೇಂದ್ರ ಸರ್ಕಾರ ಮಹಾತ್ಮಾಗಾಂಧಿ ನರೇಗಾ ಯೋಜನೆ ಹೇಸರನ್ನು ರದ್ದು ಮಾಡಿರುವ ಕ್ರಮ ಸರಿಯಾಗಿಲ್ಲ. ಆದ್ದರಿಂದ ಈ ಯೋಜನೆ ರದ್ದತಿ ವಿರೋಧಿಸಿ ಸಭೆಯಲ್ಲಿ ಠರಾವು ಪಾಸು ಮಾಡಿ ಕೇಂದ್ರ ಸರ್ಕಾರಕ್ಕೆ ಕಳಿಸಿ ಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇಂಡಿ ನಗರ ಸೇರಿದಂತೆ ಗ್ರಾಮಿಣ ಭಾಗದಲ್ಲಿರುವ ಸ್ಮಶಾನಗಳ ನಿರ್ವಹಣೆ ಮಾಡಿ ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಬೇಕು.
ಪ್ರಸಕ್ತ ಸಾಲೀನ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಮಾಡಲು ಎಲ್ಲ ಶಿಕ್ಷಕರು ಪೂರ್ವ ಸಿದ್ದತೆ ಮಾಡಿ ಮಕ್ಕಳಿಗೆ ಪರಿಕ್ಷೇ ಬರೆಯಲು ತಯಾರು ಮಾಡಬೇಕು. ಯಾವುದೆ ಕಾರಣಕ್ಕೂ ಫಲಿತಾಂಶದಲ್ಲಿ ಇಳಿಮುಖವಾಗದಂತೆ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕರ ಮೇಲಿದೆ. ಮಕ್ಕಳಿಗೆ ಅರಿತುಕೊಳ್ಳುವಂತೆ ಬೋದನೆ ಮಾಡಲು ಶಿಕ್ಷಕರಿಗೆ ತಿಳಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದರು.
ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚಾಗಿ ಬಡವರು ಆರ್ಥಿಕವಾಗಿ ದುರ್ಭಲರು ಆಗಮಿಸುತ್ತಾರೆ ಹಾಗಾಗಿ ಬರುವ ರೋಗಿಗಳಿಗೆ ವಿಶೇಷವಾಗಿ ಕಾಳಜಿ ವಹಿಸಿ ಅಲ್ಲದೆ ಸ್ವಚ್ಛತೆಗೆ ಆಧ್ಯತೆ ನೀಡಬೇಕು ಎಂದು ವೈದ್ಯಾಧಿಕಾರಿಗಳಿಗೆ ಹೇಳಿದರು.
ವೇದಿಕೆ ಮೇಲೆ ವಿಜಯಪುರ ಜಿಪಂ ಉಪಕಾರ್ಯದರ್ಶಿ ಪ್ರಕಾಶ ವಡ್ಡರ, ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ಡಿವೈಎಸ್ಪಿ ಸದಾಶಿವ ಕಟ್ಟಿಮನಿ, ತಹಸಿಲ್ದಾರ ಬಿ.ಎಸ್.ಕಡಕಭಾವಿ, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಇಲಿಯಾಸ ಬೋರಾಮಣಿ, ಕೆಡಿಪಿ ಸದಸ್ಯರಾದ ಗುರಣ್ಣಗೌಡ ಪಾಟೀಲ, ಗತಾಪಂ ಇಓ ಡಾ|| ಭೀಮಾಶಂಕರ ಕನ್ನೂರ, ತಾಲೂಕಾ ಗ್ಯಾರೆಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಪ್ರಶಾಂತ ಕಾಳೆ. ಬಿ.ಕೆ.ಪಾಟೀಲ, ಬಾಬುಸಾವಕಾರ ಮೇತ್ರಿ, ಶಿವಯೋಗೆಪ್ಪ ಚನ್ನಗೊಂಡ ಮುಂತಾದವರು ಇದ್ದರು. ಸಭೆಯಲ್ಲಿ ತಾಲೂಕಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರಗತಿ ಕುರಿತು ಮಾಹಿತಿ ನೀಡಿದರು.
ಇಂಡಿ ಇಂಡಿ ಪಟ್ಟಣದಲ್ಲಿ ಬೃಹತ್ ನಿಂಬೆ ಹೋರಾಟ. ನಿಂಬೆ ಬೆಳೆಗಾರರು ಹಾಗೂ ವಿವಿಧ ಸಂಘಟನೆಗಳಿಂದ.
ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ, ತೋಟಗಾರಿಕೆ ಅಧಿಕಾರಿ ಎಸ್.ಎಚ್.ಪಾಟೀಲ, ಹೇಸ್ಕಾಂ ಅಧಿಕಾರಿ ಮೇಂಡೆಗಾರ ಉಪಸ್ಥರಿದ್ದರು.
ನಾದ ಕೆ. ಡಿ ಪಂಚಾಯತ ಅವ್ಯವಹಾರ ಖಂಡಿಸಿ ರೈತ ಸಂಘಟನೆ ವತಿಯಿಂದ ಬೃಹತ್ ಪ್ರತಿಭಟನೆ