ಝಳಕಿ : ಕೆ. ಪಿ. ಎಂ. ಇ ಕಾಯ್ದೆ ಉಲ್ಲಂಘನೇ ಮಾಡುವ ಎಲ್ಲ ವೈದ್ಯರು ಹುಷಾರ.
ಝಳಕಿ : ಚಡಚಣ ತಾಲೂಕಿನ ಹಾವಿನಾಳ ಗ್ರಾಮದಲ್ಲಿ ಪಿ. ಎಂ. ಇ ಕಾಯ್ದೆ ಉಲ್ಲಂಘನೇ ಮಾಡಿ ಅನಧಿಕೃತವಾಗಿ ಆಸ್ಪತ್ರೆ ತೆರೆದು, ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ತಿಳಿದಕೂಡಲೆ, ಮಾನ್ಯ ತಾಲೂಕ ಆರೋಗ್ಯ ಅಧಿಕಾರಿಗಳು ಮತ್ತು ತಂಡದ ನೇತೃತ್ವದಲ್ಲಿ ನಕಲಿ ವೈದ್ಯ ಬಿ.ಆರ್.ಹಕ್ಕಿ ಅವರ ಕ್ಲಿನಿಕ್ ಮೇಲೆ ದಾಳಿ ನಡೆಸಿ, ಕ್ಲಿನಿಕ್ ಅನ್ನು ಬಂದ್ ಮಾಡಿಸಲಾಯಿತು.
ಮೂರು ದಿನಗಳಲ್ಲಿ ಸರಿಯಾದ ಪುರಾವೆ, ಮತ್ತು ಸಾಕ್ಷಾಧರಗಳನ್ನು ಒದಗಿಸಿ ಕಾನೂನಿಗೆ ಸರಿಯಾದ ಮಾಹಿತಿ ತಿಳಿಸುವಂತೆ ತಾಲೂಕ ಆರೋಗ್ಯ ಅಧಿಕಾರಿಗಳು ಡಾ. ರಾಜೇಶ್ ಕೊಳೆಕರ ಸಾಹೇಬರು ಅದೇಶಿಸಿದ್ದಾರೆ, ಯಾವುದೇ ಗ್ರಾಮಗಳಲ್ಲಿ ನಕಲಿ ವೈದ್ಯರು ಕಂಡು ಬಂದಲ್ಲಿ 9972569345 ಈ ಸಂಖ್ಯೆಗೆ ಕರೆ ಮಾಡುವಂತೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಿಬ್ಬಂದಿ ವಿಶ್ವನಾಥ್ ತೆನ್ನೆಲ್ಲಿ, ಬಿ. ಎಸ್. ಪಾಟೀಲ, ಆರ್. ಕೆ. ಪವಾರ ಉಪಸ್ಥಿತರಿದ್ದರು.