ಝಳಕಿ : ವಿವಿದೋದ್ದೆಶ್ ಪ್ರಾಥಮಿಕ ಕೃಷಿ ಸಹಕಾರ ಸಂಘ ನಿ. ಅರ್ಜನಾಳದಲ್ಲಿ ರೈತರ ಹಣ ಗುಳುಂ ಮಾಡಿದ ಕಾರ್ಯದರ್ಶಿ.
ಝಳಕಿ : 2018-19ನೇ ಸಾಲಿನಲ್ಲಿ ವಿವಿದೋದ್ದೆಶ್ ಪ್ರಾಥಮಿಕ ಕೃಷಿ ಸಹಕಾರ ಸಂಘದಲ್ಲಿನ ರೈತರ ಸಾಲ ಸರ್ಕಾರ ಮನ್ನಾ ಮಾಡಿದ್ದರು, ಮರು ಪಾವತಿ ಮಾಡಿಸಿಕೊಂಡು, ರೈತರ ಜೀವನದ ಜ್ಯೋತೆ ಚಲ್ಲಾಟ ಬಾಡುತ್ತಿದ್ದಾರೆ ಎಂದು ಅರ್ಜನಾಳ ಗ್ರಾಮದ ರೈತರಾದ ನಿಂಗನಗೌಡ ಬಿರಾದಾರ ಇವರು ಆರೋಪಿಸಿದ್ದಾರೆ.
ಅರ್ಜನಾಳ ಗ್ರಾಮದಲ್ಲಿ ವಿವಿದೋದ್ದೆಶ್ ಪ್ರಾಥಮಿಕ ಕೃಷಿ ಸಹಕಾರ ಸಂಘ ನಿ. ಕಚೇರಿಗೆ ರೈತರು ಬೀಗ ಜಡಿದು ಹೋರಾಟ ನ್ಯಾಯಕ್ಕಾಗಿ ಹೋರಾಟ ಮಾಡಲಾಯಿತು.
ಹಾಯಾತ್ಮ ತೆನೆಳ್ಳಿ ಮಾತನಾಡಿ ಸರ್ಕಾರ ರೈತರ ಸಾಲ ಮನ್ನಾ ಮಾಡಿದ್ದರು ಹಣವನ್ನು ಮರುಪಾವತಿ ಮಾಡಿಸಿಕೊಂಡು, ಹಣದ ರಸೀದಿ ಕೂಡಾ ಕೊಟ್ಟಿಲ್ಲ, ಕಟ್ಟಿರುವ ಹಣ ಯಾರ ಮತ್ತು ಯಾವ ಖಾತೆಗೆ ಜಮೆ ಆಗಿದೆ ಅನ್ನೋದು ಯಾರಿಗೂ ತಿಳಿಯದಾಗಿದೆ ಎಂದರು, ನಾವು ಸಾಲ ಸೂಲಾ ಮಾಡಿ ಹಣ ಕಟ್ಟಿದ್ದೇವೆ, ಸಾಲದ ಬಡ್ಡಿ ಕಟ್ಟಲು ಕಷ್ಟ ಪಡುತ್ತಿದ್ದೇವೆ, ಸೋಸಾಯಿಟಿಗೆ ಬಂದರೆ, ಅವಾಚ್ಯ ಶಬ್ದಗಳು ಬಳಸಿ ನಮಗೆ ಹೊರ ಹಾಕುತ್ತಾರೆ, ನಮ್ಮ ಜಮೀನನ್ನು ಇನ್ನೊಬ್ಬರಿಗೆ ಮಾರುವ ಪರಿಸ್ಥಿತಿ ಬಂದಿದೆ ಎಂದು ಅಳಲನ್ನು ತೋಡಿಕೊಂಡರು.
ರುದ್ರೇಶ್ ಮಾಳಾಬಾಗಿ (ಲೋಣಿ) ಮಾತನಾಡಿ ನಾನು ನನ್ನ ಒಂದು ಎಕರೆ ಜಮೀನು ಮಾರಿ ಸಾಲ ತುಂಬಿದ್ದೇನೆ, ಅದರ ರಸೀದಿ ಕೊಟ್ಟಿಲ್ಲ, ಕೇಳಿದರೆ ಉಡಾಫೆ ಮಾತುಗಳು ಅಡುತ್ತಾರೆ, ಮೇಲಧಿಕಾರಿಗಳಿಗೆ ತಿಳಿಸಿದರು,
ರೈತರಾದ ನಿಂಗನಗೌಡ ಬಿರಾದಾರ ಮಾತನಾಡಿ ಸರ್ಕಾರಿ ಮತ್ತು ರೈತರ ಒಟ್ಟು ಸುಮಾರು 23 ಲಕ್ಷಗಳಷ್ಟು ಹಣದ ದುರುಪಯೋಗ ಮಾಡಿ, ಸರ್ಕಾರಕ್ಕೂ, ರೈತರಿಗೂ ಮೋಸ ಮಾಡಿದ ಇಂತಹ ಭ್ರಷ್ಟ ಅಧಿಕಾರಿ ವಿರುದ್ಧ ಮೇಲಧಿಕಾರಿಗಳು ಯಾವುದೇ ರೀತಿಯಲ್ಲಿ ಕಾನೂನಾತ್ಮಕ ಕ್ರಮ ಕೈಗೊಳ್ಳುತ್ತಿಲ್ಲ ಯಾಕೆ?
ಇಂತಹ ಕೃತ್ಯಗಳು ಜಿಲ್ಲೆಯ ನಾನಾ ಸೊಸೈಟಿಗಳಲ್ಲಿ ನಡೆಯುತ್ತಿವೆ, ಇದಕ್ಕೆ ಮೇಲಧಿಕಾರಿಗಳ ಸಹಾಯ ಹಸ್ತ ಎದ್ದು ಕಾಣುತ್ತದೆ, ಕೂಡಲೆ ಇಲ್ಲಿನ ಕಾರ್ಯದರ್ಶಿ ಮೇಲೆ ಕ್ರಮ ಕೈಗೊಳ್ಳದೆ ಹೋದಲ್ಲಿ, ರೈತರು ನೇಣಿಗೆ ಶರಣಾಗುವ ಪರಿಸ್ಥಿತಿ ಬಂದರು ಬರಬಹುದು, ಯಾವುದೇ ಅಹಿತಕರ ಘಟನೆ ನಡೆದಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ಜವಾಬ್ದಾರರು ಎಂದರು.
ಈ ಸಂದರ್ಭದಲ್ಲಿ ಹಾಲಿ ಅಧ್ಯಕ್ಷರು ನಿರಂಜನ್ ಪೂಜಾರಿ ಮಾತನಾಡಿ ಎಲ್ಲ ರೈತರಿಗೆ ಸಹಕರಿಸಿ, ಹಿಂದೆ ನಡೆದ ಘಟನೆ ನನಗೆ ತಿಳಿದಿಲ್ಲ, ಇದನ್ನು ಈಗಾಗಲೇ ಮೇಲಧಿಕಾರಿಗಳು ಗಮನಿಸಿ ಹಣ ಕೊಡುವಂತೆ ತಿಳಿಸಿದ್ದಾರೆ, ಅದನ್ನು ಕಾರ್ಯದರ್ಶಿ ಬಿ. ಎಲ್. ಪಾಟೀಲ್ ಇವರು ಕೊಡುತ್ತೇನೆ ಅಂತಾ ಹೇಳಿದ್ದಾರೆ ಎಂದರು.
ವಿಷಯ ತಿಳಿದ ಕೂಡಲೆ ಕ್ಷೇತ್ರಧಿಕಾರಿ ರೊಟ್ಟಿ ಇವರಿಗೆ ಕರೆ ಮಾಡಿದರೆ, ಸ್ಥಳಕ್ಕೆ ಭೇಟಿ ಕೊಡದೆ, ರೈತರಿಗೆ ಸ್ಪಂದಿಸದೆ, ರೈತರೇ ಇನ್ನು ಕೆಲವು ದಿನಗಳು ಸಮಯ ಕೊಡುವಂತೆ ಹೇಳುತ್ತಾರೆ, ರೈತರ ಹಣ ನುಂಗಿ ನೀರು ಕುಡಿದರು, ರೈತರಿಗೆ ಇಂತಹ ಅಧಿಕಾರಿಗಳು ಬೇಡಾ ಅನ್ನೋದು ಗ್ರಾಮಸ್ಥರ ಅಳಲು.
ಈ ಸಂದರ್ಭದಲ್ಲಿ ನೀಲಪ್ಪ ತಳವಾರ, ಶಾಂತಾ ಮೇಲ್, ಜಯಶ್ರೀ ಪಾಟೀಲ್, ರವೀಂದ್ರ ತಳವಾರ, ಶೆಟ್ಟಪ್ಪ ಮೇಲ್, ರಮೇಶ ಕ್ಷತ್ರಿ, ಮಲ್ಲು ಮಾಳಾಬಾಗಿ, ಗೌಡೆಷ ಪಾಟೀಲ್, ಸುರೇಶ ಪಾಟೀಲ್, ಈರಣ್ಣಗೌಡ ಬಿರಾದಾರ, ರಾಮಣ್ಣ ಅಂಜುಟಗಿ, ಮಲ್ಲು ವಾಲಿಕಾರ, ಶ್ರೀಪತಿಗೌಡ ಬಿರಾದಾರ್, ಚಿದಾನಂದ ಬನ್ಸೋಡೆ, ಜೈಕ್ರಿಷ್ಣ ಪಾಟೀಲ್, ಬಸು ಬೂದಿಹಾಳ್, ಭೀಮರಾವ ಕನ್ನುರ ಹಾಗೂ ಎಲ್ಲ ಅರ್ಜನಾಳ ಗ್ರಾಮದ ರೈತರು ಉಪಸ್ಥಿತರಿದ್ದರು.
1 thought on “ಅರ್ಜನಾಳದಲ್ಲಿ ರೈತರ ಹಣ ಗುಳುಂ ಮಾಡಿದ ಕಾರ್ಯದರ್ಶಿ.ವಿವಿದೋದ್ದೆಶ್ ಪ್ರಾಥಮಿಕ ಕೃಷಿ ಸಹಕಾರ ಸಂಘ ನಿ. ಕಚೇರಿಗೆ ರೈತರು ಬೀಗ ಜಡಿದು ಹೋರಾಟ”