ವಿಜಯಪುರ ತಾಲೂಕಾ ೮ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಧ್ವಜಾರೋಹಣ.
ವಿಜಯಪುರ ತಾಲೂಕಾ ೮ನೇ ಕನ್ನಡ ಸಾಹಿತ್ಯ ಸಮ್ಮೇಳನ ಇಡೀ ಜಿಲ್ಲೆಯ ಗಮನಸೆಳೆದಿದ್ದು, ವೇದಿಕೆಯಲ್ಲಿ ಚಿಂತನಾಪರವಾದ ಗೋಷ್ಠಿಗಳಿದ್ದು, ಅದರ ಪ್ರಯೋಜನವನ್ನು ಸಾಹಿತಿಗಳು, ಶಿಕ್ಷಣ ಪ್ರೇಮಿಗಳು ಪಡೆದುಕೊಳ್ಳಬೇಕೆಂದು ಶುಭ ಹಾರೈಸಿದರು. ನಾಡು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಾಲೂಕಾ ಉಪವಿಭಾಗಾಧಿಕಾರಿ ಎಂಟು ಜನ ಜ್ಞಾನಪೀಠ ಪ್ರಶಸ್ತಿ ಪಡೆಯುವ ಮೂಲಕ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಿದ್ದು, ನಾವೆಲ್ಲ ಅಭಿಮಾನಪಡುವ ಸಂಗತಿ ಎಂದು ಶುಭಾಷಯ ಕೋರಿದರು. ಪರಿಷತ್ತಿನ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಾಲೂಕಾ ದಂಡಾಧಿಕಾರಿ ಪ್ರಶಾಂತ ಚನಗೊಂಡ ಮಾತನಾಡಿ ಇಡೀ ಹಿಟ್ಟಿನಹಳ್ಳಿ ಗ್ರಾಮ ಮದುವಣಗಿತ್ತಿಯಂತೆ ಶೃಂಗಾರವಾಗಿದ್ದು, ಉತ್ನಾಳ, ಕೃಷಿ ವಿಶ್ವವಿದ್ಯಾಲಯ ಹಾಗೂ ಹಿಟ್ಟಿನಹಳ್ಳಿ ಜನರ ಸಹಕಾರದೊಂದಿಗೆ ಹಾಗೂ ತಾಲೂಕಾ ಆಡಳಿತದೊಂದಿಗೆ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ದಾಸೋಹ ಮನೆಯನ್ನು ಜ್ಯೋತಿಬಾ ಚವ್ಹಾಣ, ಪುಸ್ತಕ ಮಳಿಗೆಯನ್ನು ದ್ಯಾಮಪ್ಪ ಇಂಡಿ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಗ್ರಾಮದ ಹಿರಿಯರಾದ ಶಿವನಗೌಡ ಬಿರಾದಾರ, ವಿಜಯಕುಮಾರ ಏಳಗಿ, ರಮೇಶ ಹಾದಿಮನಿ, ಬಾಬು ಪಡಸಾಲಿ, ಭಾರತಿ ಹೊಸಮನಿ, ರೇಣುಕಾ ಮ್ಯಾಗೇರಿ ಉಪಸ್ಥಿತರಿದ್ದು ಮಾತನಾಡಿದರು. ನಾಗೇಶ ಡೋಣೂರ ಹಾಗೂ ಭಾರತ ಸೇವಾದಳದ ಸಂಘಟಕರು ಧ್ವಜಾರೋಹಣ ಕಾರ್ಯ ನೆರವೇರಿಸಿದರು. ಉತ್ನಾಳ ಗ್ರಾಮದ ದ್ಯಾಮಗೊಂಡ ನಾಗೋಡ ಸ್ವಾಗತಿಸಿದರು. ಎಂ.ಎಸ್.ಪೂಜಾರಿ ನಿರ್ವಹಿಸಿದರು. ಶಾಂತು ಇಂಡಿ ನಿರೂಪಿಸಿದರು. ಸಂಗಪ್ಪ ಬಿರಾದಾರ ವಂದಿಸಿದರು. ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ತಾಲೂಕಾ ಅಧ್ಯಕ್ಷ ಡಾ.ಆನಂದ ಕುಲಕರ್ಣಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ, ಅಭಿಷೇಕ ಚಕ್ರವರ್ತಿ, ಜಗದೀಶ ಬೋಳಸೂರ, ರಿಯಾಜ ಪಿಂಜಾರ ಸೇರಿದಂತೆ ಹಿಟ್ಟಿನಹಳ್ಳಿ, ಉತ್ನಾಳ ಹಾಗೂ ಕೃಷಿ ವಿಶ್ವವಿದ್ಯಾಲಯದ ಸಿಬ್ಬಂದಿ ಭಾಗವಹಿಸಿ ಧ್ವಜಾರೋಹಣ ಯಶಸ್ವಿಗೊಳಿಸಿದರು.