ಝಳಕಿ : ಅತಿಕ್ರಮ ಸರ್ಕಾರಿ ಶಾಲೆಯ ಕಟ್ಟಡ, ತೆರವು ಗೊಳಿಸುವಂತೆ ಜಮೀನು ಮಾಲೀಕರ ಹೋರಾಟ.
ಝಳಕಿ : ಇಂಡಿ ತಾಲೂಕಿನ ಕುಡಗಿ ಗ್ರಾಮದಲ್ಲಿ ಹೋನಗೊಂಡ ವಸತಿ ಶಾಲೆಯ ಕಟ್ಟಡ ಅತಿಕ್ರವಾಗಿ, ಅನಧಿಕೃತವಾಗಿ ಕಟ್ಟಲಾಗಿದೆ ಎಂದು. ಮಲ್ಲಮ್ಮ ಹೋನಗೊಂಡ ಇವರು ಆರೋಪಿಸಿದ್ದಾರೆ.
2007ರಲ್ಲಿ ಶಿದ್ದಪ್ಪ ರಾಯಪ್ಪ ಹೋನಗೊಂಡ ಇವರು ಕುಡಗಿ ಗ್ರಾಮದ 138/2ರಲ್ಲಿ, 20 ಗುಂಟೆ ಜಮೀನು ಕರ್ನಾಟಕ ಸರ್ಕಾರದ ರಾಜ್ಯಪಾಲರ ವತಿಯಿಂದ ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಇಂಡಿ ಇವರಿಗೆ ದಾನವಾಗಿ ಕೊಟ್ಟಿದ್ದು, ಶಿಕ್ಷಣ ಇಲಾಖೆಯವರು ಶಾಲಾ ಕಟ್ಟಡ 137/3ರಲ್ಲಿ ಕಟ್ಟಿದ್ದು, ಇದು ರಾಯಪ್ಪ ಸಿದ್ದಪ್ಪ ಹೋನಗೊಂಡ ಇವರ ಜಮೀನಿನಲ್ಲಿ ಕಟ್ಟಲಾಗಿದೆ, ಈ ವಿಷಯವಾಗಿ ಇಂಡಿ ತಾಲೂಕು ಕ್ಷೇತ್ರಶಿಕ್ಷಣಾಧಿಕಾರಿಗಳು ಮತ್ತು ತಹಸೀಲ್ದಾರ ಸಾಹೇಬರಿಗೆ ಮನವಿ ಸಲ್ಲಿಸಿದ್ದರು ಯಾವುದೇ ತರನಾಗಿ ಕಾನೂನಾತ್ಮಕವಾಗಿ ಕ್ರಮ ಕೈಗೊಂಡಿಲ್ಲ.
ಮಲ್ಲಮ್ಮ ಹೋನಗೊಂಡ ಮಾತನಾಡಿ ನಮ್ಮ ಜಮೀನಿನಲ್ಲಿ ಅತಿಕ್ರಮವಾಗಿ ಕಟ್ಟಡ ಕಟ್ಟಿದ್ದು, ನಮಗೆ ಸರ್ಕಾರ ಯಾವುದೇ ತರನಾದ ಸಹಾಯ ಮಾಡಿಲ್ಲ, ಇದನ್ನು ಕೂಡಲೆ ಅಧಿಕಾರಿಗಳು ಪರಿಶೀಲನೆ ನಡೆಸಿ ನಮಗೆ 20 ಗುಂಟಾ ಜಮೀನು ವಿತರಣೆ ಮಾಡಬೇಕು, ಇಲ್ಲವಾದಲ್ಲಿ ಶಾಲೆಗೆ ಬೀಗ ಜಡಿದು ಹೋರಾಟ ಮಾಡಲಾಗುವದು, ಒಂದು ಸರ್ಕಾರ ನಮಗೆ ನ್ಯಾಯ ಕೊಡದೆ ಹೋದಲ್ಲಿ ನೇಣಿಗೆ ಶರಣಾಗುವದು ಸತ್ಯ ಎಂದು ಕಣ್ಣೀರು ಹಾಕಿದರೂ.
ಭೀಮರಾಯ ಹೋನಗೊಂಡ ಮಾತನಾಡಿ 138?2ರಲ್ಲಿನ ಜಮೀನು ಮತ್ತೆ ಮರಳಿಸಿ, ನಾನು ನಮ್ಮ ಜಮೀನಿನಲ್ಲಿ 20 ಗುಂಟೆ ನಾನು ಖುದ್ದಾಗಿ ದಾನ ಕೊಡುತ್ತೇನೆ ಕೊಡುತ್ತೇನೆ, ಆದರೆ ದಾನ ಕೊಟ್ಟಿರುವ ಜಮೀನು 138/2ರ ಪಹಣಿಯಲ್ಲಿ ನೊಂದ ಆಗಿದ್ದು, ಇದನ್ನು ಬದಲಾಯಿಸಿ 137/3ರ ಪಹಣಿಯಲ್ಲಿ ನೋಂದಾಯಿಸಬೇಕು, ಅಧಿಕಾರಿಗಳು ಯಾವುದೇ ಮನವಿಗೆ ಮರ್ಯಾದೆ ಕೊಡದೆ ಸತಾಯಿಸುತ್ತಿದ್ದಾರೆ, ಇಂಡಿ ಶಾಸಕರು ತಾಲೂಕಿನ ಅಧಿಕಾರಿಗಳತ್ತ ಗಮನ ಹರಿಸುತ್ತಿಲ್ಲ, ಶಾಸಕರು ಬಡವರ ಕೂಗಿಗೆ ಸ್ಪಂದಿಸಿ ಕೂಡಲೆ ಕ್ರಮ ಕೈಗೊಳ್ಳುವಂತೆ ಆದೇಶ ಮಾಡುವಂತೆ ವಿನಂತಿಸಿಕೊಂಡರು.
ಶಾಲಾ ಮುಖ್ಯ ಗುರುಗಳು ಬಿ. ಸಿ. ವಗ್ಗಿ ಮಾತನಾಡಿ ಈಗಾಗಲೇ 2023 ರಲ್ಲಿ ಮತ್ತು 09/01/2025, 29/12/2025 ಇಂಡಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಮಾಹಿತಿ ಕಳುಸಿದ್ದು, ಅಲ್ಲಿಂದ ಯಾವುದೇ ಉತ್ತರ ಬಂದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪರಸಪ್ಪ ಹೋನಗೊಂಡ, ಚಂದಪ್ಪ ಹೋನಗೊಂಡ, ಮಲ್ಲಪ್ಪ ಹೋನಗೊಂಡ, ಶಾಂತವ್ವ ಹೋನಗೊಂಡ, ಭೌರಮ್ಮ ಹೋನಗೊಂಡ, ಅಂಬಣ್ಣ ಹೋನಗೊಂಡ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ ನಾದ ಪಂಚಾಯಿತಿ ಅಧಿಕಾರಿ ಸುರೇಶ ಲೋಣಿ.